Gruhalakshmi Scheme: ಗೃಹಲಕ್ಷ್ಮಿ 16ನೇ ಕಂತಿನ ಹಣ ಈ ಮಹಿಳೆಯರಿಗೆ ಬರಲ್ಲ.! ಅಧಿಕೃತ ಲಿಸ್ಟ್ ಬಿಡುಗಡೆ, ನಿಮ್ಮ ಹೆಸರಿದೆಯಾ ಹೀಗೆ ಚೆಕ್ ಮಾಡಿ!
Gruhalakshmi Scheme 2025: ನಮಸ್ಕಾರ ಎಲ್ಲರಿಗೂ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ತರುವ ಮೂಲಕ ಸಾಕಷ್ಟು ಫಲಾನುಭವಿ ಮಹಿಳೆಯರಿಗೆ ಸಹಾಯಕವಾಗಿದೆ. ಅಂದರೆ ತಮ್ಮ ಮನೆಯ ಸಣ್ಣಪುಟ್ಟ ಖರ್ಚುಗಳನ್ನು ನಿಭಾಯಿಸಲು, ತಮ್ಮ ವ್ಯಾಪಾರವನ್ನು ಇನ್ನಷ್ಟು ಉತ್ತಮಗೊಳಿಸಲು ಈ ಒಂದು ಯೋಜನೆಯ ಸಹಾಯವಾಗಿದೆ. ಇದೀಗ ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಮಹಿಳೆಯರಿಗೆ ರಾಜ್ಯ ಸರ್ಕಾರ ಕಹಿ ಸುದ್ದಿಯನ್ನು ಕೊಟ್ಟಿದೆ. ಅಂದರೆ ಈ ಪಟ್ಟಿ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಬರಲ್ಲ ಎಂದು ಹೇಳಿದೆ. ನಿಮ್ಮ ಮೊಬೈಲ್ ನಲ್ಲಿ ಈ ಒಂದು ಪಟ್ಟಿ ಲಿಸ್ಟ್ ಹೇಗೆ ನೋಡುವುದು ಎಂಬುದರ ಸಂಪೂರ್ಣ ವಿವರ ಈ ಕೆಳಗೆ ನೀಡಿದೆ ಓದಿ.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2000 ನೀಡುವ ಮೂಲಕ ಸಾಕಷ್ಟು ಮಹಿಳೆಯರಿಗೆ ಸಹಾಯವಾಗಿದೆ. ಹಾಗೂ ಈ ಒಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಇದೀಗ ರಾಜ್ಯ ಸರ್ಕಾರ ನಕಲಿ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸುತ್ತಿದೆ. ಮತ್ತು ರದ್ದಾದ ರೇಷನ್ ಕಾರ್ಡ್ ಪಟ್ಟಿಯಲ್ಲಿ ಸಹ ಬಿಡುಗಡೆ ಮಾಡಿದೆ.
ರೇಷನ್ ಕಾರ್ಡ್ ರದ್ದಾದ ಪಟ್ಟಿ ಲಿಸ್ಟ್ ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಲು ಈ ಕೆಳಗಡೆ ನೀಡಿರುವ ಹಂತಗಳನ್ನು ಸಂಪೂರ್ಣ ಪರಿಶೀಲಿಸಿ.
Ration Card Cancelled List:
ನಿಮ್ಮ ರೇಷನ್ ಕಾರ್ಡ್ ಏನಾದರೂ ರದ್ದಾಗಿದೆ ಎಂಬುದನ್ನು ತಿಳಿದುಕೊಳ್ಳಲು ಅಥವಾ ಬಿಡುಗಡೆಯಾದ ಪಟ್ಟಿ ಲಿಸ್ಟ್ ನೋಡಲು ಈ ಕೆಳಗಡೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ: https://ahara.kar.nic.in/Home/EServices
ಮುಂದಿನ ಪುಟದಲ್ಲಿ ಮೇಲೆ ನೀಡಿರುವ ಮೂರು ಗೆರೆಗಳ ಮೇಲೆ ಆಯ್ಕೆ ಮಾಡಿಕೊಳ್ಳಿ, ನಂತರ ಈ ರೇಷನ್ ಕಾರ್ಡ್ ಆಪ್ಶನ್ ಆಯ್ಕೆ ಮಾಡಿಕೊಳ್ಳಿ, ಮುಂದೆ ಸೋ ಯುವರ್ ವಿಲೇಜ್ ಲಿಸ್ಟ್ ಎಂಬ ಆಯ್ಕೆ ಮಾಡಿಕೊಳ್ಳಿ. ಮುಂದಿನ ಹಂತದಲ್ಲಿ ನಿಮ್ಮ ಜಿಲ್ಲೆಯ, ತಾಲೂಕು, ನಿಮ್ಮ ಗ್ರಾಮ ಪಂಚಾಯತ್ ಹಾಗೂ ನಿಮ್ಮ ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ನಂತರ ಗೋ ಆಪ್ಶನ್ ಮೇಲೆ ಕ್ಲಿಕ್ ಮಾಡಿ.
ಮುಂದಿನ ಹಂತದಲ್ಲಿ ರದ್ದಾದ ರೇಷನ್ ಕಾರ್ಡ್ ಲಿಸ್ಟ್ ತೆರೆಯುತ್ತದೆ ಅಲ್ಲಿ ನಿಮ್ಮ ಹೆಸರು ಇದ್ದರೆ ಇನ್ನು ಮುಂದೆ ನಿಮಗೆ ಗೃಹಲಕ್ಷ್ಮಿ ಯೋಜನೆ ಯಾವುದೇ ಕಂತಿನ ಹಣ ಬರುವುದಿಲ್ಲ ಎಂದರ್ಥ, ಮತ್ತು ನಿಮ್ಮ ರೇಷನ್ ಕಾರ್ಡ್ ಯಾವ ಕಾರಣಕ್ಕೆ ರದ್ದಾಗಿದೆ ಎಂಬುದರ ಸಂಪೂರ್ಣ ವಿವರ ಅಲ್ಲಿ ನೀಡಿರುತ್ತಾರೆ.