Jio Vs Airtel Vs VI ಗಳಲ್ಲಿ ಯಾವ ವಾರ್ಷಿಕ ಪ್ಲಾನ್ ಅಗ್ಗವಾಗಿದೆ.! ಎಲ್ಲ ರಿಚಾರ್ಜ್ ಪ್ಲಾನ್ ಪ್ರಯೋಜನ ಪಟ್ಟಿ ಇಲ್ಲಿದೆ ನೋಡಿ!
Jio Vs Airtel Vs VI Plan: ನಮಸ್ಕಾರ ಎಲ್ಲರಿಗೂ ನೀವು ನಿಮ್ಮ ಮೊಬೈಲ್ ಅನ್ನು ಮತ್ತೆ ಮತ್ತೆ ರಿಚಾರ್ಜ್ ಮಾಡಲು ಬೇಸರಗೊಂಡಿದ್ದರೆ. ವಾರ್ಷಿಕ ರಿಚಾರ್ಜ್ ಯೋಜನೆಗಳು ನಿಮಗೆ ಉಪಯೋಗವಾಗಬಹುದು, ಟೆಲಿಕಾಂ ಕಂಪನಿಗಳಲ್ಲಿ ದೀರ್ಘಾವಧಿ ಮಾನ್ಯತೆ ಹೊಂದಿರುವ ಈ ಒಂದು ರಿಚಾರ್ಜ್ ಪ್ಲಾನ್ ನಲ್ಲಿ ಅನ್ಲಿಮಿಟೆಡ್ ಕರೆಗಳು, ಡೇಟಾ ಮತ್ತು ಎಸ್ಎಮ್ಎಸ್ ಪ್ರಯೋಜನಗಳು ನೀಡುತ್ತವೆ. ಏರ್ಟೆಲ್, ಜಿಯೋ, VI ಗಳ ಅತ್ಯುತ್ತಮ ವಾರ್ಷಿಕ ರಿಚಾರ್ಜ್ ಯೋಜನೆಗಳ ಸಂಪೂರ್ಣ ವಿವರ ಈ ಕೆಳಗೆ ನೀಡಲಾಗಿದೆ ಓದಿ.
ಏರ್ಟೆಲ್ನ ₹1,999 ಯೋಜನೆ ವಿವರ:
ಏರ್ಟೆಲ್ ಈ ಒಂದು ಯೋಜನೆಯು ಒಂದು ವರ್ಷದ ಮಾನ್ಯತೆಯೊಂದಿಗೆ ಹೊಂದಿರುತ್ತದೆ. ಈ ಒಂದು ಯೋಜನೆಯು ಹೆಚ್ಚಾಗಿ ಸೀಮಿತ ಡೇಟ ಅಗತ್ಯ ಇರುವ ಬಳಕೆದಾರರಿಗೆ ಅಗತ್ಯವಿದೆ. ಒಟ್ಟು ಈ ಒಂದು ಯೋಜನೆಯಲ್ಲಿ 24GB ಡೇಟಾ ಸಿಗಲಿದೆ, ಇದೆಲ್ಲ ಅಲ್ಲದೆ ಅನಿಯಮಿತ ಕರೆಗಳು, ಪ್ರತಿದಿನ 100SMS ಪಡೆಯುತ್ತಾರೆ. ಮತ್ತು ಬಳಕೆದಾರರು ಏರ್ಟೆಲ್ ಎಕ್ಸ್ಟ್ರೀಮರ್ ಅಪ್ಲಿಕೇಶನ್ ಮೂಲಕ ಉಚಿತ ಟಿವಿ ಶೋಗಳು ಮತ್ತು ಚಲನಚಿತ್ರ ಸ್ಟ್ರೀಮಿಂಗ್ ಮಾಡುವ ಪ್ರಯೋಜನವನ್ನು ಸಹ ಪಡೆಯುತ್ತಾರೆ.
Jio ₹1,899 ಯೋಜನೆ ವಿವರ:
ನಮ್ಮ ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ಈ ಪ್ಲಾನ್ ಅನ್ನು ಪೂರ್ಣವರ್ಷದ ವರೆಗೆ ಮಾನ್ಯತೆಯನ್ನು ನೀಡುವುದಿಲ್ಲ. ಇದರಲ್ಲಿ 336 ದಿನಗಳ ವರೆಗೆ ಮಾನ್ಯತೆ ನೀಡುತ್ತದೆ. ಇದರಲ್ಲಿ ಬಳಕೆದಾರರು ಉಚಿತ ಅನ್ ಲಿಮಿಟೆಡ್ ಕರೆಗಳ ಸೌಲಭ್ಯ, ಈ ಮಾನ್ಯತೆ ಅವಧಿಯಲ್ಲಿ 3600 ಉಚಿತ ಎಸ್ಎಂಎಸ್ ಗಳನ್ನು ನೀಡುತ್ತದೆ. ಒಟ್ಟು 24 ಜಿಬಿ ಡೇಟಾ ನೀಡುತ್ತದೆ, ಈ ಪ್ಲಾನ್ ನಲ್ಲಿ ಜಿಯೋ ಟಿವಿ, ಜಿಯೋ ಕ್ಲೌಡ್, ಜಿಯೋ ಸಿನಿಮಾ ಪ್ರವೇಶವನ್ನು ನೀಡುತ್ತಿದೆ.
Viನ ₹1,999 ಯೋಜನೆ ವಿವರ:
ಏರ್ಟೆಲ್ ನಂತೆ vi ಕೂಡ 1,999 ಯೋಜನೆಯನ್ನು ನೀಡುತ್ತಿದೆ. ಈ ಒಂದು ಯೋಜನೆಯಲ್ಲಿ ಒಂದು ವರ್ಷದವರೆಗೆ ಮಾನ್ಯತೆಯನ್ನು ನೀಡುತ್ತದೆ. ಅನಿಯಮಿತ ಕರೆಯ ಸೌಲಭ್ಯ ಮತ್ತು 3600 ಎಸ್ಎಂಎಸ್ ಅನ್ನು ಪಡೆಯುತ್ತಾರೆ, ಈ ಯೋಜನೆ ಕೂಡ ಸೀಮಿತ ಡೇಟಾ ಅವಧಿಯೊಂದಿಗೆ ಒಟ್ಟು 24 ಜಿಬಿ ಡೇಟಾ ನೀಡುತ್ತದೆ. ಈ ಒಂದು ಯೋಜನೆ ಕಡಿಮೆ ಡೇಟಾ ಮತ್ತು ದೀರ್ಘಾವಧಿ ಮಾನ್ಯತೆ ಅಗತ್ಯ ಇರುವ ಗ್ರಾಹಕರಿಗೆ ಉತ್ತಮವಾಗಿದೆ.