Ration Card: ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ.! ಇಲ್ಲಿದೆ ಕೊನೆಯ ದಿನಾಂಕ ನೋಡಿ!

Ration Card: ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ.! ಇಲ್ಲಿದೆ ಕೊನೆಯ ದಿನಾಂಕ ನೋಡಿ!

Ration Card Update: ನಮಸ್ಕಾರ ಎಲ್ಲರಿಗೂ ರಾಜ್ಯದ ಎಲ್ಲ ಜನರು ಸರ್ಕಾರಿ ಯೋಜನೆಗಳ ಉಪಯೋಗ ಪಡೆದುಕೊಳ್ಳಲು ಈ ಒಂದು ರೇಷನ್ ಕಾರ್ಡ್ ಮುಖ್ಯ ದಾಖಲೆ ಆಗಿದೆ. ಹಾಗೂ ಈ ಒಂದು ಕಾರ್ಡ್ ನಿಂದ ಉಚಿತವಾಗಿ ಮನೆಗೆ ರೇಷನ್ ಕೂಡ ಪಡೆಯಬಹುದಾಗಿದೆ. ಇದೀಗ ಸಾಕಷ್ಟು ಜನರು ರೇಷನ್ ಕಾರ್ಡ್ ತಿದ್ದುಪಡಿಗಾಗಿ ಕಾಯ್ದು ಕುಳಿತಿದ್ದಾರೆ, ಅಂತ ಜನರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.

ರಾಜ್ಯ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶವನ್ನು ಒದಗಿಸಿ ಕೊಟ್ಟಿದ್ದು ಜನರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಯಾವೆಲ್ಲ ದಾಖಲೆಗಳು ಬೇಕು ಮತ್ತು ಏನೆಲ್ಲ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಬಹುದು ಮತ್ತು ತಿದ್ದುಪಡಿ ಮಾಡಿಸಲು ಕೊನೆಯ ದಿನಾಂಕ ಯಾವಾಗ ಎಂಬುದರ ಸಂಪೂರ್ಣ ವಿವರ ಈ ಕೆಳಗೆ ನೀಡಿದ ಓದಿ.

ರೇಷನ್ ಕಾರ್ಡ್ ನಲ್ಲಿ ಏನೆಲ್ಲಾ ತಿದ್ದುಪಡಿ ಮಾಡಿಸಬಹುದು:

  • ಹೆಸರು ತಿದ್ದುಪಡಿ
  • ಕುಟುಂಬದ ಸದಸ್ಯರ ಬದಲಾವಣೆ
  • ವಿಳಾಸ ಬದಲಾವಣೆ
  • ಹೆಸರು ರದ್ದುಗೊಳಿಸುವುದು
  • ಕುಟುಂಬದ ಸದಸ್ಯರ ಹೆಸರು ತಿದ್ದುಪಡಿ ಹಾಗೂ ಇತರ ಸೇವೆಗಳು

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಬೇಕಾಗುವ ದಾಖಲೆಗಳು:

  • ಹಳೆಯ ರೇಷನ್ ಕಾರ್ಡ್
  • ಮೊಬೈಲ್ ಸಂಖ್ಯೆ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಜನನ ಪ್ರಮಾಣ ಪತ್ರ
  • ಆಧಾರ್ ಕಾರ್ಡ್

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಕೊನೆಯ ದಿನಾಂಕ ಮತ್ತು ಅರ್ಜಿ ಹೇಗೆ ಸಲ್ಲಿಸುವುದು:

ಬೇಗನೆ ಈ ಮೇಲೆ ನೀಡಿರುವ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಸಬಹುದಾಗಿದೆ, ಮತ್ತು ತಿದ್ದುಪಡಿ ಮಾಡಿಸಲು ಜನವರಿ 31 ಕೊನೆಯ ದಿನಾಂಕ ಆಗಿರುತ್ತದೆ.

Leave a Comment